ಕೆ.ಶಶಿಕಾಂತ ಕವಿತೆ-ಹಾರೈಕೆ

ಕಾವ್ಯ ಸಂಗಾತಿ ಹಾರೈಕೆ ಕೆ.ಶಶಿಕಾಂತ ಯಾರ ಸೋಲೋಯಾರ ಗೆಲುವೋಯಾರ ನೋವೋಯಾರ ನಲಿವೋಬದುಕಿಗಾಗಲಿ ವಿಜಯವುಯಾರ ಸಾವೋಯಾರ ಹುಟ್ಟೋಯಾರ ಕೊಲೆಯೋಯಾರ ಹಬ್ಬವೋಬಾಳಿಗಿರಲಿ ಸಕಲ ಭಾಗ್ಯವು ಕೊಡಲಿ ಗರಗಸಮಚ್ಚು ಖಡ್ಗವುಹಸಿರನಳಿಯಲುಉಸಿರ ತೆಗೆಯಲುಬೇಡವೆಂಬುದು ತಿಳಿಯಲಿ ಅಳೆದು ತೂಗುವಸೇರು ತಕ್ಕಡಿಒಳಿತು ಕೆಡುಕಿನಸೈರಣೆಯ ನೀಡಲಿಎಬ್ಬಿ ತೆಗೆಯುವಹಾರಿ ಗುದ್ದಲಿಅಗೆದು ಹಾಕಲಿಕೊಳೆ ಕಸವನುಮುಂದೆ ತಳ್ಳಲಿಸಿಲುಕಿದ ಬಡ ಬಾಳನು ಗಿಡಮರದ ಬೆಳೆಯುಜೀವಪ್ರೀತಿ ಸಿರಿಯುನೆಲದ ತುಂಬಾ ಹಬ್ಬಲಿಸೊಕ್ಕು ಬಿಂಕದ, ಕಾಕು ಬುದ್ಧಿಯಹಲವು ವೈರಗಳಳಿಯಲಿಭೇದವಳಿದು,ಎಲ್ಲರನು ಸೆಳೆದುಬನ್ನಿಬನ್ನಿರೆಂದು ಕರೆಯುತಲಿ ಬಾಳುನೂರು ಸೀಮೆಯ ಮೀರಲಿಹಬ್ಬವಾಗಲಿ ‘ವಿಜಯ ದಶಮಿ’ಯುಸೋಲು ಶಬ್ದವು ಅಳಿಯಲಿ.